ದರ್ಶನ್ (ಜನನ ೧೬ ಫೆಬ್ರವರಿ ೧೯೭೭ ), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು ೧೯೯೦ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು . ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. ೨೦೦೧ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಿದ್ದರು. ಕರಿಯಾ (೨೦೦೩) ,ನಮ್ಮ ಪ್ರೀತಿಯ ರಾಮು (೨೦೦೩),ಕಲಾಸಿಪಾಳ್ಯ (೨೦೦೫),ಗಜ (೨೦೦೮), ಸಾರಥಿ (೨೦೧೧) ಮತ್ತು ಬುಲ್ ಬುಲ್ (೨೦೧೩) ನಂತಹ ವಾಣಿಜ್ಯಿಕವಾಗಿ ಯಶಸ್ವಿಯಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾರಥಿ ಮತ್ತು ಸಂಗೊಳ್ಳಿ ರಾಯಣ್ಣ (೨೦೧೨) ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆದರು ಮತ್ತು ಸಂಗೊಳ್ಳಿ ರಾಯಣ್ಣ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ . ದರ್ಶನ್ ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲಿ ತೊಡಗಿದ್ದಾರೆ. ಅವರು 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು. == ದರ್ಶನ್ ತೂಗುದೀಪ್ ಕುಟುಂಬ == ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ, ಫೆಬ್ರುವರಿ ೧೬ ೧೯೭೭ರಂದು ದರ್ಶನ್ ಹುಟ್ಟಿದರು. . ಈಗ ಕನ್ನಡ ಚಿತ್ರರಂಗದ ಚಿತ್ರ ನಿರ್ಮಾಪಕರೊಲ್ಲಬ್ಬರಾಗಿದ್ದಾರೆ. ತೂಗುದೀಪ ಪ್ರೂಡಕ್ಷನ್ಸ್ಅಡಿಯಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ತೂಗುದೀಪ ಡಿಸ್ಟ್ರಿಬ್ಯೂಟರ್ಸ್ಸೋ ಅಡಿಯಲ್ಲಿ ಚಿತ್ರ ವಿತರಕರಾಗಿದ್ದಾರೆ. ತಮ್ಮದಿನಕರ್ ತೂಗುದೀಪ್ ನಿರ್ದೇಶಕರಾಗಿದ್ದಾರೆ. == ವೈಯಕ್ತಿಕ ಜೀವನ == ದರ್ಶನ್ ೨೦೦೦ ರಲ್ಲಿ ವಿಜಯಲಕ್ಷ್ಮೀ ಅವರನ್ನು ವಿವಾಹವಾದರು. ಅವರಿಗೆ 'ವಿನೇಶ್' ಹೆಸರಿನ ಒಂದು ಗಂಡು ಮಗು ಇದೆ. == ಕೃಷಿ ಜೀವನ == ದರ್ಶನ್ ಅವರಿಗೆ ಕೃಷಿ ಬಹಳ ಅಚ್ಚುಮೆಚ್ಚು. ಅವರು ಪಾರ್ಮ್ ಹೌಸ್‌ನಲ್ಲಿ ಹಸು, ಕುದುರೆ ಸಾಕಿದ್ದಾರೆ. ಅವುಗಳ ಲಾಲನೆ ಪಾಲನೆ ಅವರೆ ಕುದ್ದು ಮಾಡುತ್ತಾರೆ. ಇತ್ತೀಚಿಗೆ ಅವರು ಸುಮಾರು 50 ಎಕರೆ ಜಮೀನಿನಲ್ಲಿ ಅಧಿಕ ಲಾಭ ತರುವ ಕ್ಯಾಸನೂರು ನಾಟಿ ಅಡಿಕೆ ತಳಿಯ ತೋಟ ಮಾಡಿದ್ದಾರೆ. ಇತ್ತೀಚೆಗೆ ಅಧಿಕ ಸಮಯ ಇದೇ ತೋಟದಲ್ಲಿ ಕಳೆಯುತ್ತಾರೆ. ದರ್ಶನ್ ಅವರ ಅಡಿಕೆ ತೋಟ ನೋಡಲು ಬಹಳಷ್ಟು ಅಭಿಮಾನಿಗಳು ಇಲ್ಲಿಗೆ ಬರುತ್ತಾರೆ == ದರ್ಶನ್ ಅಭಿನಯದ ಕನ್ನಡ ಚಿತ್ರಗಳು == 56 2014 ಅಂಬರೀಶ ದರ್ಶನ್ ರಚಿತಾ ರಾಮ್ === ವಿಶೇಷ ಪಾತ್ರಗಳಲ್ಲಿ ದರ್ಶನ್ದರ್ಶನ್ ಕೆಲವು ಚಿತ್ರಗಳಲ್ಲಿ ವಿಶೇಷ ಪಾತ್ರಗಳನ್ನು ಮಾಡಿದ್ದಾರೆ. === == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಪ್ರಶಸ್ತಿಗಳು ಹಾಗೂ ನಾಮನಿರ್ದೇಶನಗಳು == == ಉಲ್ಲೇಖಗಳು ==